ಪುಟ್ಟ ಕಥೆ: ಯಾರು ಸುಶಿಕ್ಷಿತರು
ಒಬ್ಬ ಐ.ಎ.ಎಸ್. ಅಧಿಕಾರಿ ಒಂದು ದಿನ ತನ್ನ ಹೆಂಡತಿಯೊಂದಿಗೆ ಪ್ರವಾಸ ಹೋಗುತ್ತಾನೆ. ಹಾಗೇ ಹೋಗುವಾಗ ಒಂದು ಹಳ್ಳಿಯ ಹೊರಭಾಗದಲ್ಲಿ ಕಾರನ್ನು ನಿಲ್ಲಿಸಿ ಪ್ರಕೃತಿಯ ಸೌಂದರ್ಯವನ್ನು ಅಸ್ವಾದಿಸುತ್ತಿರುತ್ತಾನೆ. ಆಗ ಅಲ್ಲಿದ್ದ ಒಂದು ಮರದ ಮೇಲೆ ಗಿಜಗದ ಗೂಡು ಇರುವುದನ್ನು ನೋಡುತ್ತಾನೆ. ಪತ್ನಿಗೆ ತೋರಿಸಿದಾಗ ಆಕೆ ಅದನ್ನು ಮರದಿಂದ ಕಿತ್ತು ಕೊಡಲು ಹೇಳುತ್ತಾಳೆ. ಆದರೆ ಆ ಅಧಿಕಾರಿಗೆ ಮರಹತ್ತಲು ಬರುವುದಿಲ್ಲ. ಆತ ಸುತ್ತ ನೋಡುತ್ತಾನೆ. ಅಲ್ಲಿ ದೂರದಲ್ಲಿ ಒಬ್ಬ ದನ ಕಾಯುವ ಹುಡುಗ ಕಾಣಿಸುತ್ತಾನೆ. ಅಧಿಕಾರಿ ಆತನನ್ನು ಕರೆದು ಮರ ಹತ್ತಿ ಗಿಜಗದ ಗೂಡನ್ನು ಕಿತ್ತು ಕೊಡಲು ಹೇಳುತ್ತಾನೆ. ಆಗ ಆ ಹುಡುಗ ನಿರಾಕರಿಸುತ್ತಾನೆ. ಆಗ ಅಧಿಕಾರಿ ಹಣ ಕೊಡುತ್ತೇನೆ ಕಿತ್ತು ಕೊಡು ಎನ್ನುತ್ತಾನೆ. ಆಗ ಆ ಹುಡುಗ ಹಣ ಕೊಟ್ಟರೂ ಕಿತ್ತು ಕೊಡುವುದಿಲ್ಲ. ಮತ್ತು ನಿಮಗೂ ಕೀಳಲು ಬಿಡುವುದಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಆ ಅಧಿಕಾರಿಗೆ ಆಶ್ಚರ್ಯವಾಗಿ ಕಾರಣ ಕೇಳುತ್ತಾನೆ. ಅದಕ್ಕೆ ಆ ಹುಡುಗ ಸ್ವಾಮಿ ಅದು ಗಿಜಗ ಹಕ್ಕಿಯ ಗೂಡು. ಅದು ಮೊಟ್ಟೆ ಇಡಲು ಆ ಗೂಡನ್ನು ಕಟ್ಟಿದೆ. ಅದಕ್ಕೆ ಅದು ತಿಂಗಳುಗಟ್ಟಲೆ ಶ್ರಮ ಪಟ್ಟಿದೆ. ಈಗ ಅದು ಆಹಾರ ಹುಡುಕಲು ಹೊರಗಡೆ ಹೋಗಿದೆ. ನೀವು ಗೂಡು ತೆಗೆದು ಕೊಂಡು ಹೋದರೇ ಅದಕ್ಕೆ ಎಷ್ಟು ನೋವಾಗುವುದಿಲ್ಲ. ಆದ್ದರಿಂದ ಆ ಗೂಡನ್ನು ಕೀಳಲು ಬಿಡುವುದಿಲ್ಲ ಎಂದಿದ್ದು ಎಂದು ಹೇಳುತ್ತಾನೆ. ಆಗ ಆ ಅಧಿಕಾರಿಗೆ ನಾಚಿಕೆಯಾಗಿ ಅಯ್ಯೋ ನಾನು ಎಷ್ಟು ಓದಿದರೇನು ಪ್ರಯೋಜನ ಆ ದನಕಾಯುವ ಹುಡುಗನಿಗಿರುವ ಕಾಳಿಜಿ ಇಲ್ಲದೇ ಹೋಯಿತಲ್ಲ. ಇಲ್ಲಿ ನಿಜವಾಗಲು ಸುಶಿಕ್ಷಿತ ಯಾರು? ನಾನಾ ಅಥವಾ ಆ ದನ ಕಾಯುವ ಹುಡುಗನಾ ಎಂದು ತನಗೆ ತಾನೇ ಪ್ರಶ್ನಿಸಿಕೊಳ್ಳುತ್ತಾನೆ.